ಹದಿನೆಂಟು ಪ್ರಮುಖ ಪುರಾಣಗಳಲ್ಲಿ ಪದ್ಮ ಪುರಾಣವೂ ಒಂದು. ಪದ್ಮ ಪುರಾಣಇದರಲ್ಲಿ ಐದು ಕಾಂಡಗಳಿವೆ. ಪ್ರಥಮ ಸೃಷ್ಟಿ ಕಾಂಡದಲ್ಲಿ ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇದೆ.ಇದರಲ್ಲಿ ಗ್ರಹಗಳ ಬಗ್ಗೆ,ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೂಗೋಳದ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ.ನಾಲ್ಕನೆಯಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ.ಕೊನೆಯ ಉತ್ತರಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ. == ಬಾಹ್ಯ ಸಂಪರ್ಕಗಳು == Purāna, 1st Purāna, 2nd & 3rd Purāna, 5th & 6th == ಉಲ್ಲೇಖಗಳು == ಟೆಂಪ್ಲೇಟು: